ಕೆಪಾಸಿಟರ್ (Capacitor) (ಅಧ್ಯಾಯ 3 ಭಾಗ 1)

ಕೆಪಾಸಿಟರ್ ಬಗ್ಗೆ ವಿವರವಾಗಿ ತಿಳಿಯಿರಿ

ಕೆಪಾಸಿಟರ್ ಯಂದರೇನು?

ಕೆಪಾಸಿಟರ್ ಎಲೆಕ್ಟ್ರಾನಿಕ್ ಘಟಕವಾಗಿದ್ದು ಅದು ವಿದ್ಯುತ್ ಚಾರ್ಜ್ ಅನ್ನು ಸಂಗ್ರಹಿಸುತ್ತದೆ.
ಕೆಪಾಸಿಟರ್ ಮೊಬೈಲ್ ಹಾಗು ಅನೇಕ ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸುವ ಘಟಕ (Component) ಆಗಿದೆ. ಇದು ಇಲೆಕ್ಟ್ರಾನಿಕ್ ಸರ್ಕ್ಯೂಟ್ ನಲ್ಲಿ ಕೆಲಸ ಮಾಡುತ್ತದೆ,
ಕೆಪಾಸಿಟರ್ ಎನ್ನುವುದು ಇಲೆಕ್ಟ್ರಾನಿಕ್  ಕ್ಷೇತ್ರದಲ್ಲಿ ವಿದ್ಯುತ್ ಶಕ್ತಿಯನ್ನು ಸಂಗ್ರಹಿಸುವ ಸಾಧನವಾಗಿದೆ. ಇದು ಎರಡು ಟರ್ಮಿನಲ್‌ಗಳನ್ನು ಹೊಂದಿರುವ ನಿಷ್ಕ್ರಿಯ ಎಲೆಕ್ಟ್ರಾನಿಕ್ ಘಟಕವಾಗಿದೆ ಕೆಪಾಸಿಟರ್ ಅನ್ನು ವಿದ್ಯುತ್ ವಾಹಕಗಳಿಂದ ಮಾಡಲಾಗಿದ್ದು, ಅವಾಹಕದಿಂದ ಬೇರ್ಪಡಿಸಲಾಗುತ್ತದೆ. ಈ ಅವಾಹಕ ಪದರವನ್ನು ಡೈಎಲೆಕ್ಟ್ರಿಕ್ ಎಂದು ಕರೆಯಲಾಗುತ್ತದೆ. ಎಲ್ಲಾ ಕೆಪಾಸಿಟರ್ಗಳು ಒಂದೇ ಮೂಲ ತತ್ವ ಘಟಕಗಳನ್ನು ಹೊಂದಿದ್ದರೂ, ವಸ್ತುಗಳ ಆಯ್ಕೆ ಮತ್ತು ಸಂರಚನೆಯು ಪರಸ್ಪರ ಭಿನ್ನವಾಗಿರುತ್ತದೆ.
ಕೆಪಾಸಿಟರ್ ನ ಪರಿಣಾಮವನ್ನು ಕೆಪಾಸಿಟನ್ಸ್ ಎಂದು ಕರೆಯಲಾಗುತ್ತದೆ. ಸರ್ಕ್ಯೂಟ್‌ನಲ್ಲಿ ಸಾಮೀಪ್ಯದಲ್ಲಿರುವ ಯಾವುದೇ ಎರಡು ವಿದ್ಯುತ್ ವಾಹಕಗಳ ನಡುವೆ ಕೆಲವು ಕೆಪಾಸಿಟನ್ಸ್ ಅಸ್ತಿತ್ವದಲ್ಲಿದ್ದರೆ, ಕೆಪಾಸಿಟರ್ ಎನ್ನುವುದು ಸರ್ಕ್ಯೂಟ್‌ಗೆ ಕೆಪಾಸಿಟನ್ಸ್ ಅನ್ನು ಸೇರಿಸಲು ವಿನ್ಯಾಸಗೊಳಿಸಲಾದ ಒಂದು ಅಂಶವಾಗಿದೆ. ಕೆಪಾಸಿಟರ್ ಅನ್ನು ಮೂಲತಃ ಕಂಡೆನ್ಸರ್ ಎಂದು ಕರೆಯಲಾಗುತ್ತದೆ. ಪ್ರಾಯೋಗಿಕ ಕೆಪಾಸಿಟರ್ಗಳ ಭೌತಿಕ ರೂಪ ಮತ್ತು ನಿರ್ಮಾಣವು ವ್ಯಾಪಕವಾಗಿ ಬದಲಾಗುತ್ತದೆ ಮತ್ತು ಅನೇಕ ರೀತಿಯ ಕೆಪಾಸಿಟರ್ಗಳು ಸಾಮಾನ್ಯ ಬಳಕೆಯಲ್ಲಿವೆ. ಹೆಚ್ಚಿನ ಕೆಪಾಸಿಟರ್ಗಳು ಕನಿಷ್ಟ ಎರಡು ವಿದ್ಯುತ್ ವಾಹಕಗಳನ್ನು ಲೋಹೀಯ ಫಲಕಗಳು ಅಥವಾ ಡೈಎಲೆಕ್ಟ್ರಿಕ್ ಮಾಧ್ಯಮದಿಂದ ಬೇರ್ಪಡಿಸಿದ ಮೇಲ್ಮೈಗಳ ರೂಪದಲ್ಲಿ ಹೊಂದಿರುತ್ತವೆ.

ಮೊಬೈಲ್ ನಲ್ಲಿ ಕೆಪಾಸಿಟರ್ ನ ಕೆಲಸ ಏನು?

  1. ವೋಲ್ಟೇಜ್ ಅನ್ನು ಸಂಸ್ಕರಣೆ (filter) ಮಾಡುತ್ತದೆ
  2. ಡಿಸಿ ಕರೆಂಟ್ ಸಂಗ್ರಹಿಸುವುದು
  3. ಏಸಿ ಕರೆಂಟ್ ಅನ್ನು ಸಂಸ್ಕರಣೆ ಮಾಡುತ್ತದೆ
  4. ಸಿಗ್ನಲ್ ಸಂಸ್ಕರಣೆ (filter) ಮಾಡುವುದು.

ಎಷ್ಟು ಬಣ್ಣದ ಕ್ಯಾಪಾಸಿಟರ್ ಗಳನ್ನು ಮೊಬೈಲ್ ನಲ್ಲಿ ಬಳಸುತ್ತಾರೆ? 

ಮೊಬೈಲ್ ನಲ್ಲಿ 3 ಬಣ್ಣದ ಕೆಪಾಸಿಟರ್ ಗಳನ್ನು ಬಳಸುತ್ತಾರೆ 
  • ಕಂದು ಬಣ್ಣ (Brown color)
  • ಬೂದು ಬಣ್ಣ (Grey color)
  • ಹಳದಿ ಬಣ್ಣ (Yellow color)

ಮೊಬೈಲ್ ನಲ್ಲಿ ಎಷ್ಟು ವಿಧವಾದ ಕೆಪಾಸಿಟರ್ ಬಳಸುತ್ತಾರೆ

ಮೊಬೈಲ್ ನಲ್ಲಿ 2 ವಿಧವಾದ ಕೆಪಾಸಿಟರ್ ಬಳಸುತ್ತಾರೆ
  1. ಸಾಮಾನ್ಯ ಕೆಪಾಸಿಟರ್ (Capacitor)
  2. ಜಂಟಿ ಕೆಪಾಸಿಟರ್ (Joint capacitor) 

ವೋಲ್ಟೇಜ್ ಸಂಸ್ಕರಣೆ (filter) ಮಾಡುವುದು: 

ವೋಲ್ಟೇಜ್ ಅನ್ನು ಸಂಸ್ಕರಣೆ (filter) ಕೆಲಸ ಅಂದರೆ ಏನು ಯಂಬ ಪ್ರಶ್ನೆ ಗೆ ಉತ್ತರಿಸುತ್ತೇನೆ.
ಮೊಬೈಲ್ ನ ಸರ್ಕ್ಯೂಟ್ ನಲ್ಲಿ ಇರುವ ಐಸಿ ಗಳು ಈಎಂಎಂಸಿ ಐಸಿ (emmc ic), ಸಿಪಿಯು (cpu) ಚಾರ್ಜಿಂಗ್ ಐಸಿ (charging ic) ಲೈಟ್ ಐಸಿ (Light ic) ಮುಂತಾದ ಯಾವುದೇ ಐಸಿ ಗಳಿರಬಹುದು ಈ ಐಸಿ ಗಳಿಗೆ ಹರಿಯುವ ವಿದ್ಯುತ್ ನ ಪ್ರಮಾಣ ದಲ್ಲಿ ವ್ಯತ್ಯಾಸ ಆದಲ್ಲಿ ಐಸಿ ಗಳು ಹಾಳಾಗುವ ಯಲ್ಲಾ ಸಾಧ್ಯತೆ ಗಳು ಇರುತ್ತವೆ, ಅದಕ್ಕಾಗಿ ಐಸಿಗಳ ಸುರಕ್ಷತೆಗಾಗಿ ಸರ್ಕ್ಯೂಟ್ ನಲ್ಲಿ ಐಸಿ ಗಳ ಹತ್ತಿರ ಕೆಪಾಸಿಟರ್ ಅಳವಡಿಸಲಾಗುತ್ತದೆ.




ಡಿಸಿ ಕರೆಂಟ್ ಸಂಗ್ರಹಿಸುವುದು (Charging Discharging):

ವಿದ್ಯುತ್ ಅನ್ನು ಶೇಖರಿಸಿಡುವುದು ಮತ್ತು ಅಗತ್ಯವಿದ್ದಾಗ ಈ ಶಕ್ತಿಯನ್ನು ಮತ್ತೆ ಸರ್ಕ್ಯೂಟ್‌ಗೆ ನೀಡುವುದು ಇದರ ಕಾರ್ಯ, ಬೇರೆ ರೀತಿಯಲ್ಲಿ ಹೇಳುವುದಾದರೆ, ಅದು ಅದರಲ್ಲಿ ಸಂಗ್ರಹವಾಗಿರುವ ವಿದ್ಯುತ್ ಚಾರ್ಜ್ ಅನ್ನು ಡಿಸ್ಚಾರ್ಜ್ ಮಾಡುತ್ತದೆ ಮತ್ತು ಹೊರಹಾಕುತ್ತದೆ.

ಚಾರ್ಗಿಂಗ್ ಡಿಸ್ಚಾರ್ಜಿಂಗ್ ಕಾರ್ಯ ದಲ್ಲಿ 10 ವೋಲ್ಟೇಜ್ ನ ಕ್ಯಾಪಾಸಿಟರ್ ಗೆ 11 ವೋಲ್ಟ್ ನಷ್ಟು ವಿದ್ಯುತ್ ಪ್ರವಾಹ ಹರಿದಾಗ ಔಟ್ ಪುಟ್ 10 ವೋಲ್ಟೇಜ್ ನಷ್ಟೇ ಬರುತ್ತದೆ,
ಹೇಗೆಂದರೆ 11 ವೋಲ್ಟ್ ನಷ್ಟು ವಿದ್ಯುತ್ ಪ್ರವಾಹ ಇನ್ಪುಟ್ ನಲ್ಲಿ ಕೊಟ್ಟಾಗ 1 ವೋಲ್ಟ್ ತನ್ನಲ್ಲಿ ಶೇಖರಿಸಿಕೊಂಡು ಕೇವಲ 10 ವೋಲ್ಟೇಜ್ ನಷ್ಟೇ ಬಿಡುಗಡೆ ಮಾಡುತ್ತದೆ.

ಹಾಗೆಯೇ
ಚಾರ್ಗಿಂಗ್ ಡಿಸ್ಚಾರ್ಜಿಂಗ್ ಕಾರ್ಯ ದಲ್ಲಿ 10 ವೋಲ್ಟೇಜ್ ನ ಕ್ಯಾಪಾಸಿಟರ್ ಗೆ 9 ವೋಲ್ಟ್ ನಷ್ಟು ವಿದ್ಯುತ್ ಪ್ರವಾಹ ಹರಿದಾಗ ಔಟ್ ಪುಟ್ 10 ವೋಲ್ಟೇಜ್ ನಷ್ಟೇ ಬರುತ್ತದೆ,
ಹೇಗೆಂದರೆ 9 ವೋಲ್ಟ್ ನಷ್ಟು ವಿದ್ಯುತ್ ಪ್ರವಾಹ ಇನ್ಪುಟ್ ನಲ್ಲಿ ಕೊಟ್ಟಾಗ ತನ್ನಲ್ಲಿ ಶೇಖರಿಸಿಕೊಂಡಿದ್ದ 1 ವೋಲ್ಟ್ ಅನ್ನು ಡಿಸ್ಚಾರ್ಜ್ ಮಾಡಿ 10 ವೋಲ್ಟೇಜ್ ನಷ್ಟೇ ಬಿಡುಗಡೆ ಮಾಡುತ್ತದೆ.

ಸಿಗ್ನಲ್ ಸಂಸ್ಕರಣೆ ಮಾಡುವುದು:

ಸಂಸ್ಕರಣೆ ಅನೇಕ ಸರ್ಕ್ಯೂಟ್‌ಗಳ ಮೂಲಭೂತ ಭಾಗವಾಗಿದೆ ಉದಾಹರಣೆ ಆಡಿಯೊ ಸಂಸ್ಕರಣೆ, ರೇಡಿಯೋ ಸ್ವಾಗತ ಮತ್ತು ಪವರ್ ಸರ್ಕ್ಯೂಟ್ ಸಂಸ್ಕರಣೆ, ಇದನ್ನೇ ನಾವು ಸಿಗ್ನಲ್ ಸಂಸ್ಕರಣೆ ಯನ್ನುತ್ತೇವೆ.
ಇಂತಹ ಅನೇಕ ಕಾರ್ಯಗಳಿಗೆ ಸಂಸ್ಕರಣಾ ಘಟಕವಾಗಿ ಕೆಪಾಸಿಟರ್ ಗಳನ್ನು ಬಳಸಲಾಗುತ್ತದೆ.

ಏಸಿ ಕರೆಂಟ್ ಸಂಸ್ಕರಣೆ:

ಏಸಿ ಕರೆಂಟ್ ಅನ್ನು ಸಂಸ್ಕರಣೆ ಅಂದರೆ ನಾವು ಬಳಸುವ ಮೊಬೈಲ್ ನ ಚಾರ್ಜರ್ ನಿಂದ ಬರುವ ಕರೆಂಟ್ 100% ಶುದ್ಧ ಡಿಸಿ ಕರೆಂಟ್ ಆಗಿರುವುದಿಲ್ಲ ಹಾಗಾಗಿ ಏಸಿ ಕರೆಂಟ್ ಅನ್ನು ಸಂಸ್ಕರಣೆ ಮಾಡಿ ಶುದ್ಧ ಡಿಸಿ ಕರೆಂಟ್ ಮೊಬೈಲ್ ಗೆ ಹರಿಸಲು ಕೆಪಾಸಿಟರ್ ಗಳನ್ನು ಬಳಸಲಾಗುತ್ತದೆ.

ಇಂದಿನ ಅಧ್ಯಾಯದಲ್ಲಿ ಮೊಬೈಲ್ ನಲ್ಲಿ ಬಳಸುವ ಕ್ಯಾಪಾಸಿಟರ್ ಬಗ್ಗೆ ತಿಳಿದೆವು.


ರೆಸಿಸ್ಟರ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Previous
Next Post »