ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ (ಅಧ್ಯಾಯ 2, ಭಾಗ 1)

ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ

ಇಂದಿನ ಅಧ್ಯಾಯದಲ್ಲಿ ಮೊಬೈಲ್ ನಲ್ಲಿ ಬಳಸಲಾಗುವ ವಸ್ತುಗಳ ಬಗ್ಗೆ ತಿಳಿಯೋಣ. 

ಸ್ಮಾರ್ಟ್ ಫೋನ್ ಒಂದು ಬಹುಕಾರ್ಯಕ (multitasking) ಸಾಧನ ವಾಗಿದೆ. ಇದರಲ್ಲಿ ವಿಡಿಯೋ ಸೆರೆಹಿಡಿಯುವಿಕೆ, ಇಂಟರ್ನೆಟ್ ಬ್ರೌಸಿಂಗ್, ಗೇಮಿಂಗ್,ಇತ್ಯಾದಿ ಅನೇಕ ದೊಡ್ಡ ದೊಡ್ಡ ಕಂಪ್ಯೂಟರ್ ಗಳಲ್ಲಿ ಆಗುವಂತಹ ಕೆಲಸಗಳು ಆಗುವುದರಿಂದ ಇದರಲ್ಲಿ ಕಂಪ್ಯೂಟರ್ ನಲ್ಲಿ ಬಳಸುವ ಪ್ರೊಸೆಸರ್, ರಿಯಾಮ್ (Ram), ಹಾರ್ಡ್ ಡಿಸ್ಕ್ ನಂತಹ ದೊಡ್ಡ ಗಾತ್ರದ ವಸ್ತುಗಳನ್ನು ಚಿಕ್ಕ ಗಾತ್ರದಲ್ಲಿ ಮಾರ್ಪಾಟು ಮಾಡಿ ಬಳಸಲಾಗಿದೆ, ಅದನ್ನ ನಾವು CPU, eMMC, UFS, Power IC ಯೆನ್ನುತ್ತೇವೆ.  

ಮದರ್ ಬೋರ್ಡ್

ಮೊಬೈಲ್ ರಿಪೇರಿ ತರಬೇತಿ

ಸ್ಮಾರ್ಟ್ಫೋನ್ ನ ಮದರ್ ಬೋರ್ಡ್ SMD (Surface Mount Device) ಪ್ಲಾಟ್ಫಾರ್ಮ್ ನಲ್ಲಿ ತಯಾರಿಸಲ್ಪಟ್ಟಿದೆ, ಹಾಗೂ ಇದರಲ್ಲಿ ಬಳಸುವ ಇಲೆಕ್ಟ್ರಾನಿಕ್ ವಸ್ತುಗಳನ್ನು SMD Components ಯನ್ನುತ್ತೇವೆ. 


ಮೊಬೈಲ್ ನಲ್ಲಿ ಬಳಸಲಾಗುವ ಇಲೆಕ್ಟ್ರಾನಿಕ್ ವಸ್ತುಗಳು 


ಸಿ ಪಿ ಯು  CPU (ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್)


cpu 


ಈ ಯಮ್ ಯಮ್ ಸಿ  eMMC [ಎಂಬೆಡೆಡ್ ಮಲ್ಟಿ ಮೀಡಿಯಾ ಕಾಂಟ್ರೋಲ್ಲೆರ್ ]


eMMC 


ಪವರ್ ಐಸಿ 

power ic 


ಮೇಲೆ ತಿಳಿಸಿದ ಐಸಿ ಗಳು ಸ್ಮಾರ್ಟ್ಫೋನ್ ಪವರ್ ಆನ್ ಆಗಲು ಬೇಕಾಗುವ ಐಸಿ ಗಳು ಆದರೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಲು, ಇಂಟರ್ನೆಟ್ ಬಳಸಲು, ಮೊಬೈಲ್ ಬ್ಯಾಟರಿ ಚಾರ್ಜ್ ಆಗಲು, ಕ್ಯಾಮೆರಾ ಕೆಲಸ ಮಾಡಲು, ವಯರ್ಲೆಸ್ ಛಾರ್ಜಿಂಗ್ ಆಗಲು, ಬೇರೆ ಬೇರೆ ಐಸಿ ಗಳ ಸಹಾಯ ಬೇಕಾಗುತ್ತವೆ.

  ಐಸಿ ಗಳು ಈ ಕೆಳಗಿನಂತಿವೆ 

1. ಛಾರ್ಜಿಂಗ್ ಐಸಿ

ಛಾರ್ಜಿಂಗ್ ಐಸಿ
ಛಾರ್ಜಿಂಗ್ ಐಸಿ



2. ನೆಟ್ವರ್ಕ್ ಐಸಿ





ನೆಟ್ವರ್ಕ್ ಐಸಿನೆಟ್ವರ್ಕ್ ಐಸಿ



3. ಕ್ಯಾಮೆರಾ ಐಸಿ

ಕ್ಯಾಮೆರಾ ಐಸಿ
camera ic





4. ವಯರ್ಲೆಸ್ ಛಾರ್ಜಿಂಗ್ ಐಸಿ


ಈಗ ನಾವು ಐಸಿ ಗಳ ಬಗ್ಗೆ ತಿಳಿದುಕೊಂಡೆವು



ಈಗ ನಾವು ಮೊಬೈಲ್ ನ ಮದರ್ ಬೋರ್ಡ್ ನಲ್ಲಿ ಬಳಸುವ ಚಿಕ್ಕ ಚಿಕ್ಕ ಇಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ 

(ಇವುಗಳು ವೋಲ್ಟೇಜ್ ನ ಏರು ಪೆರು ಹಾಗು ವೋಲ್ಟೇಜ್ ಕಡಿಮೆ ಹಾಗೂ ಹೆಚ್ಚಿಸಲು ಬಳಸುತ್ತೇವೆ) 

1. ಯಸ್ಎಂಡಿ ಕಂಡೆನ್ಸರ್  ಅಥವಾ ಕ್ಯಾಪಾಸಿಟರ್ 




 
 ಟೆಲಿವಿಷನ್‌ಗಳು, ರೇಡಿಯೊಗಳು ಮತ್ತು ಇತರ ರೀತಿಯ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಶಕ್ತಿ ಸಂಗ್ರಹಿಸುವ ಸಾಧನಗಳು ಇವು. ಮೊಬೈಲ್, ರೇಡಿಯೊ, ಡಿಜಿಟಲ್ ಕ್ಯಾಮೆರಾ, ಟಿವಿ, ಕಂಪ್ಯೂಟರ್ ಮುಂತಾದ  ವಸ್ತುಗಳಲ್ಲಿ ನಾವು ಕೆಪಾಸಿಟರ್‌ಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತೇವೆ. ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳಲ್ಲಿ ಬಳಸುವ ಕೆಪಾಸಿಟರ್‌ಗಳಂತೆಯೇ ಮೋಡಗಳು ಸಹ ಕಾರ್ಯನಿರ್ವಹಿಸುತ್ತವೆ, ಒಂದೇ ವ್ಯತ್ಯಾಸವೆಂದರೆ ಅವು ಎಲೆಕ್ಟ್ರಾನಿಕ್ ಕೆಪಾಸಿಟರ್ಗಿಂತ ದೊಡ್ಡದಾಗಿದೆ.



2. ಯಸ್ಎಂಡಿ ಡಯೋಡ್ 


ಡಯೋಡ್ ಅನ್ನು ಎರಡು ಟರ್ಮಿನಲ್ ಎಲೆಕ್ಟ್ರಾನಿಕ್ ಘಟಕ ಎಂದು ವ್ಯಾಖ್ಯಾನಿಸಲಾಗಿದೆ, ಅದು ಕೇವಲ ಒಂದು ದಿಕ್ಕಿನಲ್ಲಿ ವೋಲ್ಟೇಜ್ ಪ್ರವಾಹವನ್ನು ನಡೆಸುತ್ತದೆ. 



3. ಯಸ್ಎಂಡಿ ಟ್ರಾನ್ಸಿಸ್ಟರ್


 
ಟ್ರಾನ್ಸಿಸ್ಟರ್ ಎನ್ನುವುದು ಎಲೆಕ್ಟ್ರಾನಿಕ್ ಸಿಗ್ನಲ್‌ಗಳು ಮತ್ತು ವಿದ್ಯುತ್ ಶಕ್ತಿಯನ್ನು ವರ್ಧಿಸಲು ಅಥವಾ ಬದಲಾಯಿಸಲು ಬಳಸುವ ಅರೆವಾಹಕ ಸಾಧನವಾಗಿದೆ.




4. ಯಸ್ಎಂಡಿ ರೆಸಿಸ್ಟರ್ 




ರೆಸಿಸ್ಟರ್ ವಿದ್ಯುತ್ ಘಟಕವಾಗಿದ್ದು ಅದು ವಿದ್ಯುತ್ ಪ್ರವಾಹವನ್ನು ಕಡಿಮೆ ಮಾಡುತ್ತದೆ.






5. ಯಸ್ಎಂಡಿ ಫ್ಯೂಸ್ 




ಫ್ಯೂಸ್ ಎನ್ನುವುದು ವಿದ್ಯುತ್ ಸುರಕ್ಷತಾ ಸಾಧನವಾಗಿದ್ದು ಅದು ವಿದ್ಯುತ್ ಸರ್ಕ್ಯೂಟ್‌ನ ಓವರ್‌ಕರೆಂಟ್ ರಕ್ಷಣೆಯನ್ನು ಒದಗಿಸುತ್ತದೆ. 

6.ಯಸ್ಎಂಡಿ ಕಾಯಿಲ್ 






ಕಾಯಿಲ್ ಅನ್ನು ಇಂಡಕ್ಟರ್ ಎಂದೂ ಕರೆಯುತ್ತಾರೆ.
ಕಾಯಿಲ್ ಯಾವಾಗಲೂ ಪ್ರವಾಹದ ಯಾವುದೇ ಬದಲಾವಣೆಯ ಒಳಹರಿವನ್ನು ಪ್ರತಿರೋಧಿಸುತ್ತದೆ.




7. ಯಸ್ಎಂಡಿ ಆಂಟೆನಾ ಸ್ವಿಚ್ 




8. ಯಸ್ಎಂಡಿ ಸೆನ್ಸರ್ 


9. ಯಸ್ಎಂಡಿ ಮೈಕ್ 


10. ಯಸ್ಎಂಡಿ ಎಲ್ ಇ ಡಿ 

ಮೇಲೆ ತಿಳಿಸಿದ ಯಲ್ಲಾ ಎಲೆಕ್ಟ್ರಾನಿಕ್ ಬಿಡಿಭಾಗಗಳು ಮೊಬೈಲ್ ನಲ್ಲಿ ಬಳಸುವ ವಸ್ತುಗಳಾಗಿವೆ, ಇದರಲ್ಲಿ ಅನೇಕ ವಿಧಗಳಿವೆ. 

ಮುಂದಿನ ಭಾಗದಲ್ಲಿ ಮೇಲೆ ತಿಳಿಸಿದ ಯಲ್ಲ ಎಲೆಕ್ಟ್ರಾನಿಕ್ ಬಿಡಿಭಾಗಗಳ ಬಗ್ಗೆ ವಿವರವಾಗಿ ತಿಳಿಯೋಣ 


ಮುಂದಿನ ಭಾಗ ಓದಿ 
ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ (ಅಧ್ಯಾಯ 2, ಭಾಗ 2)

Previous
Next Post »