ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ?

Search Results


Web results

ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ

ಸ್ನೇಹಿತರೆ ಸದ್ಯದ ಪರಿಸ್ಥಿತಿಯಲ್ಲಿ ನೌಕರಿ ಕನಸಾಗಿದೆ, ಅದರಲ್ಲು ಸರಕಾರೀ ನೌಕರಿ ಅನ್ನೋದು ಸಾಕಷ್ಟು ಜನರ ಕನಸಾಗಿಯೇ ಉಳಿದಿದೆ.

ಇದು ಇಂಜಿನಿಯರಿಂಗ್ ನಂತಹ ಪದವಿ ಪಡೆದ ವಿದ್ಯಾರ್ಥಿಗಳ ಪರಿಸ್ಥಿತಿ, ಇಂತಹ ಸಂಧರ್ಭ ದಲ್ಲಿ ಅಲ್ಪ ಸ್ವಲ್ಪ ಓದಿದವರು ಕಾಲೇಜಿನ ಮೆಟ್ಟಿಲೇರದವರು ಏನು ಮಾಡಿಯಾರು.

ಇದನ್ನೆಲ್ಲಾ ಮುಂದಿಟ್ಟು ನನ್ನ ಸಣ್ಣ ಪ್ರಯತ್ನ ಹಾಗು ಕನಸು ಏನೆಂದರೆ ಕರ್ನಾಟಕದ ಪ್ರತಿಯೊಬ್ಬ ಯುವಕ ತನ್ನ ಕುಟುಂಬ  ದೊಂದಿಗೆ ಸಂತೋಷವಾಗಿರಬೇಕು, ಚಾಚುವ ಕೈ ಬದಲು ಕೊಡುವ ಕೈ ಆಗಬೇಕು.

ಮನೆಯಿಂದ ಕೆಲಸ ಮಾಡಿ ಹಣ ಗಳಿಸುವುದು ಹೇಗೆ ಸಾಧ್ಯ?
ಇದಕ್ಕೆ ಉತ್ತರವಾಗಿ ಹಾಗು ನಿಮಗೆ ಬೆನ್ನೆಲುಬಾಗಿ ನಾನು ನಿಂತಿರುವೆ.

ನಾನು ಮನೆಯಿಂದ ದುಡಿಯುವ ಕೆಲವು ದಾರಿಯನ್ನು ಹೇಳಿ ಕೊಡುತ್ತೇನೆ ಇದಕ್ಕಾಗಿ ನಾವು ಮೊದಲೆನಯದಾಗಿ ನಮಗೆ ಇಷ್ಟವಾದ ವಿಷಯ ಯಾವುದು ಯೆನ್ನುವುದು ಮನದಟ್ಟು ಮಾಡಿಕೊಳ್ಳಬೇಕು.


ಮನೆಯಿಂದ ಕೆಲಸ ಮಾಡಿ ಹಣ ಗಳಿಸುವ ಮಾಧ್ಯಮ
ಮನೆಯಿಂದ ಕೆಲಸ ಮಾಡಿ ಹಣ ಗಳಿಸುವ ಮಾಧ್ಯಮಗಳು ಈ ಕೆಳಗಿನಂತಿವೆ 
೧. ಯೂಟ್ಯೂಬ್ 
೨. ವೆಬ್ ಸೈಟ್ 
೩. ಆನ್ಲೈನ್ ಮಾರಾಟ 
೪. ಮೊಬೈಲ್ ರಿಪೇರಿ 

ಸ್ನೇಹಿತರೆ ಮೊದಲೇ ತಿಳಿಸಿದಂತೆ ನಮ್ಮಲ್ಲಿರುವ ಪ್ರತಿಭೆ ಗುರುತಿಸಿಕೊಳ್ಳಬೇಕು, 
ಉದಾಹರಣೆಗೆ 
ಹಾಸ್ಯ, 
ಗಾನ, 
ನಟನೆ, 
ರುಚಿ ರುಚಿಯಾದ ಅಡುಗೆ ಮಾಡುವುದು, 
ವಿಸ್ಮಯಕರ ಸಂಗತಿ ತಿಳಿಸುವುದು, 
ಜನರ ಉಪಯೋಗಕರ ಹೊಸ ಹೊಸ ಸಂಶೋಧನೆ ಮಾಡುವುದು. 
ಇನ್ತಹ ಹಲವಾರು ವಿಷಯಗಳಿವೆ, ಇಂತಹ ಯಾವುದಾದರೊಂದು ವಿಷಯವನ್ನು ಜನರೊಂದಿಗೆ ಹಂಚಿಕೊಳ್ಳುವುದರೊಂದಿಗೆ ಸಂಪಾದನೆಯೂ ಆಗುತ್ತದೆ.  


ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ


ಪ್ರತಿಯೊಬ್ಬರಲ್ಲೂ ಏನಾದರೂ ಪ್ರತಿಭೆ ಇದ್ದೆ ಇರುತ್ತದೆ ಈ ಪ್ರತಿಭೆ ಯನ್ನು ಪ್ರಪಂಚವೇ ನೋಡುವಾಂತಾಗಬೇಕು ಹಾಗೆಯೇ ಸಂಪಾದನೆಯೂ ಆಗಬೇಕು. 

ಎಷ್ಟೊಂದು ಸುಲಭ ವಲ್ಲವೇ ನಮ್ಮ ಉತ್ಸಾಹ ವನ್ನು ಜನರೊಂದಿಗೆ ಹಂಚಿಕೊಳ್ಳುವುದರೊಂದಿಗೆ ಸಂಪಾದನೆಯೂ ಆಗುವುದು. 

ಹಾಗೆಯೇ ಕೆಲವು ಕಾರ್ಯ ಗಳಿಗೆ ಸ್ವಲ್ಪ ವಿಶೇಷ ಜ್ಞಾನ ಪಡಿಯಬೇಕಾಗುತ್ತದೆ, ಹಾಗು ಅದರಿಂದ ಉತ್ತಮ ಲಾಭ ಗಳಿಸಬಹುದು, ಉದಾಹರಣೆ ಮೊಬೈಲ್ ರಿಪೇರಿ, ಇಲೆಕ್ಟ್ರಾನಿಕ್ ಮಾಧ್ಯಮಗಳನ್ನ ಸರಿಪಡಿಸುವುದು ಇತರೆ.
ನಾನು ಮೊಬೈಲ್ ರಿಪೇರಿ ಕಲಿಸುವುದರ ಜೊತೆಗೆ ಮನೆಯಿಂದ ಸಂಪಾದಿಸುವ ಸಲಹೆಗಳನ್ನು ಕೂಡ ಕೊಡುವೆ. 
Previous
Next Post »