ಈ ಅಧ್ಯಾಯದಲ್ಲಿ ಡಯೋಡ್ ಎಂದರೇನು, ಡಯೋಡ್ ನ ಚಿಹ್ನೆ ಯಾವುದು, ಮೊಬೈಲ್ ನಲ್ಲಿ ಡಯೋಡ್ ನ ಕೆಲಸ ಏನು, ಡಯೋಡ್ ಅನ್ನು ಹೇಗೆ ಪರಿಶೀಲಿಸುವುದು ಯಂಬುದರ ಬಗ್ಗೆ ವಿವರವಾಗಿ ತಿಳಿಯೋಣ.
- ಡಯೋಡ್ ಎಂದರೇನು?
- ಡಯೋಡ್ ನ ಚಿಹ್ನೆ ಯಾವುದು?
- ಮೊಬೈಲ್ ನಲ್ಲಿ ಡಯೋಡ್ ನ ಕೆಲಸ ಏನು?
- ಡಯೋಡ್ ಅನ್ನು ಹೇಗೆ ಪರಿಶೀಲಿಸುವುದು?
1. ಡಯೋಡ್ ಎಂದರೇನು?
ಡಯೋಡ್ ಯಂಬುದು ಎರಡು ಟರ್ಮಿನಲ್ ಎಲೆಕ್ಟ್ರಾನಿಕ್ ಘಟಕವಾಗಿದ್ದು ಅದು ಕರೆಂಟ್ ಪ್ರವಾಹವನ್ನು ಪ್ರಾಥಮಿಕವಾಗಿ ಒಂದು ದಿಕ್ಕಿನಲ್ಲಿ ಮಾತ್ರ ನಡೆಸುತ್ತದೆ, ಇದು ಒಂದು ದಿಕ್ಕಿನಲ್ಲಿ ಕಡಿಮೆ ಪ್ರತಿರೋಧವನ್ನು (Resistance) ಹೊಂದಿರುತ್ತದೆ, ಮತ್ತು ಇನ್ನೊಂದು ದಿಕ್ಕಿನಲ್ಲಿ ಹೆಚ್ಚಿನ ಪ್ರತಿರೋಧವನ್ನು (Resistance) ಹೊಂದಿರುತ್ತದೆ.
2. ಡಯೋಡ್ ನ ಚಿಹ್ನೆ ಯಾವುದು?
ಇದು ಡಯೋಡ್ ನ ಚಿಹ್ನೆ
3. ಮೊಬೈಲ್ ನಲ್ಲಿ ಡಯೋಡ್ ನ ಕೆಲಸ ಏನು?
ಮೊಬೈಲ್ ನಲ್ಲಿ ಡಯೋಡ್ ಅನ್ನು ಎರೆಡು ಕೆಲಸಗಳಿಗೆ ಉಪಯೋಗಿಸುತ್ತಾರೆ
- ಏಸಿ ಕರೆಂಟ್ ಅನ್ನು ಡಿಸಿ ಗೆ ಪರಿವರ್ತಿಸಲು ಬಳಸುತ್ತಾರೆ. ಇದನ್ನು ನಾವು ರೆಕ್ಟಿಫಿಕೇಷನ್ (Rectification) ಯನ್ನುತ್ತೇವೆ. ಅಂದರೆ ಕನ್ನಡದಲ್ಲಿ ಸರಿಪಡಿಸುವಿಕೆ ಅಥವಾ ಸುಧಾರಣೆ ಯಂದು ಹೇಳಬಹುದು.
- ಮೊಬೈಲ್ ನಲ್ಲಿ ಡಯೋಡ್ ಅನ್ನು ಪೋಲಾರಿಟಿ ಪ್ರೊಟೆಕ್ಷನ್ (Polarity protection) ಅಂದರೆ ಕನ್ನಡದಲ್ಲಿ ಧ್ರುವೀಯತೆಯ ರಕ್ಷಣೆ ಯಂದು ಹೇಳಬಹುದು.
ರೆಕ್ಟಿಫಿಕೇಷನ್ (Rectification) ಯಂದರೇನು ಮತ್ತು ಮೊಬೈಲ್ ನಲ್ಲಿ ಯಲ್ಲಿ ಬಳಸುತ್ತೇವೆ :
ರೆಕ್ಟಿಫಿಕೇಷನ್ (Rectification) ಕೆಲಸವನ್ನು ಮೊಬೈಲ್ ನಲ್ಲಿ ಚಾರ್ಜಿಂಗ್ ಸರ್ಕ್ಯೂಟ್ ನ ಹತ್ತಿರ ಹಾಗು ಮೊಬೈಲ್ ನ ಬ್ಯಾಟರಿ ಯ ಟರ್ಮಿನಲ್ ನ ಹತ್ತಿರ ಬಳಸುತ್ತೇವೆ.
ಪೋಲಾರಿಟಿ ಪ್ರೊಟೆಕ್ಷನ್ (Polarity protection) ಅಂದರೆ ಏನು ಹಾಗು ಮೊಬೈಲ್ ನಲಿ ಇದನ್ನು ಯಲ್ಲಿ ಬಳಸುತ್ತೇವೆ? :
ಪೋಲಾರಿಟಿ ಪ್ರೊಟೆಕ್ಷನ್ (Polarity protection) ಅನ್ನು ಮೊಬೈಲ್ ನ ಲೈಟಿಂಗ್ ಸರ್ಕ್ಯೂಟ್ ನ ಹತ್ತಿರ ಬಳಸುತ್ತೇವೆ
4. ಡಯೋಡ್ ಅನ್ನು ಹೇಗೆ ಪರಿಶೀಲಿಸುವುದು?
ಡಯೋಡ್ ಅನ್ನು ಮಲ್ಟಿಮೀಟರ್ ನಿಂದ ಪರಿಶೀಲಿಸಲಾಗುವುದು, ಮಲ್ಟಿ ಮೀಟರ್ ಅನ್ನು ಬಜರ್ ಮೋಡ್ ನಲ್ಲಿ ಹೊಂದಿಸಿ ಕೆಂಪು ಪ್ರೋಬ್ ಅನ್ನು ಡಯೋಡ್ ನ ಅನೋಡ್ ಗೆ ಹಾಗು ಕಪ್ಪು ಪ್ರೋಬ್ ಅನ್ನು ಡಯೋಡ್ ನ ಕ್ಯಾಥೋಡ್ ಗೆ ಸ್ಪರ್ಶಿಸಬೇಕು,
ಮಲ್ಟಿಮೀಟರ್ ನಲ್ಲಿ ಅಂಕೆ ಗಳು ತೋರಿಸಿದ್ದಲ್ಲಿ ಡಯೋಡ್ ಸರಿ ಇದೆ ಯಂದು, ಮಲ್ಟಿಮೀಟರ್ ನಲ್ಲಿ ಕೇವಲ 1 ಅಂಕೆ ತೋರಿಸಿದ್ದಲ್ಲಿ ಡಯೋಡ್ ಹಾಳಾಗಿದೆ ಯಂದು.
ಹಾಗೆಯೇ ಕೆಂಪು ಪ್ರೋಬ್ ಅನ್ನು ಡಯೋಡ್ ನ ಕ್ಯಾಥೋಡ್ ಗೆ ಹಾಗು ಕಪ್ಪು ಪ್ರೋಬ್ ಅನ್ನು ಡಯೋಡ್ ನ ಅನೋಡ್ ಗೆ ಸ್ಪರ್ಶಿಸಿದಾಗ ಕೂಡ ಮಲ್ಟಿಮೀಟರ್ ನಲ್ಲಿ ಕೇವಲ 1 ಅಂಕೆ ತೋರಿಸಬೇಕು.
ConversionConversion EmoticonEmoticon